ಅಮೃತಸರ : ಪಂಜಾಬ್‌ನ ಅಮೃತಸರದಲ್ಲಿ ಇಂದು ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಸುಖ್‌ಬೀರ್ ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಿಂದ ಬಾದಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅವರು ಧಾರ್ಮಿಕ ಶಿಕ್ಷೆಯಾಗಿ ಕಾವಲು ಕಾಯುತ್ತಿದ್ದಾಗ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಈ ಘಟನೆ ನಡೆದಿದೆ. ಸುಖ್ಬೀರ್ ಅವರ ಕಾಲಿಗೆ ಮುರಿತವಾಗಿದೆ, ಆದ್ದರಿಂದ ಅವರು ಗಾಲಿಕುರ್ಚಿಯ ಮೇಲೆ ಕುಳಿತು ಕೈಯಲ್ಲಿ ಈಟಿಯೊಂದಿಗೆ ಕಾವಲು ಕಾಯುತ್ತಿದ್ದರು.
#WATCH | Punjab: Bullets fired at Golden Temple premises in Amritsar where SAD leaders, including party chief Sukhbir Singh Badal, are offering 'seva' under the religious punishments pronounced for them by Sri Akal Takht Sahib, on 2nd December.
Details awaited. pic.twitter.com/CFQaoiqLkx
— ANI (@ANI) December 4, 2024
ಅಷ್ಟರಲ್ಲಿ ದಾಳಿಕೋರ ತನ್ನ ಕೈಯಲ್ಲಿ ಪಿಸ್ತೂಲನ್ನು ಬೀಸುತ್ತಾ ಬಂದು ಸುಖ್ಬೀರ್ ಸಿಂಗ್ ರ ಮೇಲೆ ಗುಂಡು ಹಾರಿಸಿದ್ದಾನೆ.ಆದರೆ, ಅಲ್ಲಿದ್ದ ಜನ ಎಚ್ಚೆತ್ತು ನೇರವಾಗಿ ದಾಳಿಕೋರನನ್ನು ಎದುರಿಸಿದರು. ಅಷ್ಟರಲ್ಲಿ ದಾಳಿಕೋರ ಟ್ರಿಗರ್ ಒತ್ತಿದ ಪರಿಣಾಮ ಬುಲೆಟ್ ಗಾಳಿಗೆ ಹೋಯಿತು. ಗುಂಪು ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ದಾಳಿಕೋರ ತನ್ನ ಹೆಸರನ್ನು ನಾರಾಯಣ ಸಿಂಗ್ ಚೌರಾ ಎಂದು ಬಹಿರಂಗಪಡಿಸಿದ್ದಾನೆ. ಮಾಹಿತಿ ಪ್ರಕಾರ, ಆರೋಪಿ ಬಬ್ಬರ್ ಖಾಲ್ಸಾ ಜೊತೆ ಸಂಬಂಧ ಹೊಂದಿದ್ದು, ಪಾಕಿಸ್ತಾನಕ್ಕೂ ಹೋಗಿದ್ದ ಎನ್ನಲಾಗಿದೆ.
ನಾರಾಯಣ ಸಿಂಗ್ ಯಾರು?
ಮೂಲಗಳ ಪ್ರಕಾರ, ದಾಳಿಕೋರ ನಾರಾಯಣ ಸಿಂಗ್ ಚೌರಾ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ (ಬಿಕೆಐ) ಭಯೋತ್ಪಾದಕನಾಗಿದ್ದ. ನಾರಾಯಣ್ ಚೌರಾ ಅವರು 1984 ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಮತ್ತು ಭಯೋತ್ಪಾದನೆಯ ಆರಂಭಿಕ ಹಂತದಲ್ಲಿ ಪಂಜಾಬ್‌ಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಗ, ಅವನು ಗೆರಿಲ್ಲಾ ಯುದ್ಧ ಮತ್ತು ದೇಶದ್ರೋಹಿ ಸಾಹಿತ್ಯದ ಬಗ್ಗೆ ಪುಸ್ತಕವನ್ನು ಬರೆದಿದ್ದಾನೆ ಎಂದು ವರದಿಯಾಗಿದೆ. ಈತ ಬುಡೈಲ್ ಜೈಲ್ ಬ್ರೇಕ್ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ನಾರಾಯಣ್ ಈ ಹಿಂದೆ ಪಂಜಾಬ್‌ನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ.