ಚಿಕ್ಕಮಗಳೂರು : ಕುವೆಂಪು ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಭಾರೀ ಅನಾಹುತವೊಂದು ತಪ್ಪಿದೆ.
ನಿನ್ನೆ ತಾನೆ ಕಲ್ಬುರ್ಗಿ ಜಿಲ್ಲೆಯ ಶಹಬಾದ್ ನಲ್ಲಿ ಹಾಸನ್ ಸೋಲಾಪುರ್ ಎಕ್ಸ್ಪ್ರೆಸ್ ರೈಲಿನಲ್ಲಿ ಏಕಾಏಕಿ ಹೋಗಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು ಪ್ರಯಾಣಿಕರು ಭಯದಿಂದ ರೈಲಿನಿಂದ ಕೆಳಗೆ ಇಳಿಯುತ್ತಿದ್ದರು. ಈ ಒಂದು ಘಟನೆ ಇದೀಗ ಮಾಸುವ ಮುನ್ನವೇ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹೌದು ಕುವೆಂಪು ಎಕ್ಸ್ಪ್ರೆಸ್ ರೈಲಿನ ಎರಡು ಭೋಗಿಗಳಲ್ಲಿ ಬೆಂಕು ಕಾಣಿಸಿಕೊಂಡಿದೆ. ತರೀಕೆರೆ ರೈಲ್ವೆ ಸ್ಟೇಷನ್ ನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದಾರೆ ಕೂಡಲೇ ತರೀಕೆರೆ ರೈಲ್ವೆ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.