ಮಾಂಡಾನಾ : ಅಮೆರಿಕದಲ್ಲಿ ಮತ್ತೊಂದು ಭೀಕರ ವಿಮಾನ ದುರಂತವೊಂದು ಸಂಭವಿಸಿದ್ದು, ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ.
ಸೋಮವಾರ ಮಾಂಟಾನಾ ವಿಮಾನ ನಿಲ್ದಾಣದಲ್ಲಿ ಇಳಿದ ಸಣ್ಣ ವಿಮಾನವೊಂದು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4 ಜನರನ್ನು ಹೊತ್ತೊಯ್ಯುತ್ತಿದ್ದ ಏಕ ಎಂಜಿನ್ ವಿಮಾನವು ಮಧ್ಯಾಹ್ನ 2 ಗಂಟೆಗೆ ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು ಎಂದು ಕಾಲಿಸ್ಪೆಲ್ ಪೊಲೀಸ್ ಮುಖ್ಯಸ್ಥ ಜೋರ್ಡಾನ್ ವೆನೆಜಿಯೊ ಮತ್ತು ಫೆಡರಲ್ ವಿಮಾನಯಾನ ಆಡಳಿತ ತಿಳಿಸಿದೆ.
ಸೋಮವಾರ ಮಧ್ಯಾಹ್ನ ಮಾಂಟಾನಾದ ಕಾಲಿಸ್ಪೆಲ್ ಸಿಟಿ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಯಿತು ಎಂದು ಎನ್ಬಿಸಿ ಮಾಂಟಾನಾದ ವರದಿ ತಿಳಿಸಿದೆ. ಮಧ್ಯಾಹ್ನ 2:08 ಕ್ಕೆ ತುರ್ತು ಕರೆ ಬಂದ ನಂತರ ಘಟನೆಯು ತಕ್ಷಣ ತುರ್ತು ಪ್ರತಿಕ್ರಿಯೆಗೆ ಕಾರಣವಾಯಿತು ಎಂದು ಫ್ಲಾಟ್ಹೆಡ್ ಕೌಂಟಿ ಶೆರಿಫ್ ಬ್ರಿಯಾನ್ ಹೈನೊ ದೃಢಪಡಿಸಿದರು. ಬೆಂಕಿ ನಂದಿಸುವ ಮೊದಲು ಹುಲ್ಲಿನ ಪ್ರದೇಶಕ್ಕೆ ಹರಡಿತು ಎಂದು ವೆನೆಜಿಯೊ ಹೇಳಿದ್ದಾರೆ.
WATCH: Scott Carpenter sent us this video of the plane crash at the Kalispell City Airport. NBC Montana has a reporter on scene. LATEST: https://t.co/ydTXF8BavJ pic.twitter.com/8u66O2n1RG
— NBC Montana (@NBCMontana) August 11, 2025