ಬೆಂಗಳೂರು : ಬೆಂಗಳೂರಿನಲ್ಲಿ ಅತ್ಯಾಚಾರ ಸಂತ್ರಸ್ತೆಯ ವಿರುದ್ಧವೇ ಆಟೋ ಚಾಲಕರೊಬ್ಬರು ದೂರು ನೀಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಇದೀಗ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಯುವತಿ ಮೇಲೆಯೇ ಇದೀಗ ದೂರು ದಾಖಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಸಂತ್ರಸ್ತೆಯ ವಿಚಾರಣೆ ನಡೆಯಲಿದೆ.
ಘಟನೆ ನಡೆದ ದಿನ ಗೆಳಯನ ಜೊತೆಗೆ ಕೋರಮಂಗಲಕ್ಕೆ ಹೋಗಿದ್ದ ಯುವತಿ ಊಟ ಮುಗಿಸಿಕೊಂಡು ಬರುವಾಗ ತಾನೇ ಕಾರು ಚಾಲನೆ ಮಾಡಿದ್ದಾಳೆ. ಈ ವೇಳೆ ಮಂಗಳ ಜಂಕ್ಷನ್ ನಲ್ಲಿ ಸರಣಿ ಅಪಘಾತ ಎಸಗಿದ್ದಾರೆ. 2 ಕಾರು, 1 ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾಳೆ.
ಈ ವೇಳೆ ಆಟೋ ಚಾಲಕ, ಬೈಕ್ ಸವಾರರು ಯುವತಿಯನ್ನು ಅಡ್ಡಗಟ್ಟಿ ಆಕ್ಸಿಡೆಂಟ್ ಗೆ ಪರಿಹಾರ ಕೊಡುವಂತೆ ಕೇಳಿದ್ದಾರೆ. ಆದರೆ ಯುವತಿ ಕಾರನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಹೀಗಾಗಿ ಅತ್ಯಾಚಾರ ಸಂತ್ರಸ್ತೆ ಯುವತಿ ವಿರುದ್ಧ ಆಟೋಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆಟೋ ದೂರು ದಾಖಲಿಸಿದ್ದಾರೆ.