ಹಾಸನ : ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ(Suraj Revanna)ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಎಫ್ಐಆರ್(FIR) ದಾಖಲಾಗಿದೆ. ಘಟನೆ ಸಂಬಂಧ ಸಂತ್ರಸ್ತ ನೀಡಿದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 , 342 ಹಾಗೂ 506 ರಡಿ ಕೇಸ್ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ MLC ಸೂರಜ್ ರೇವಣ್ಣ ಹೇಳಿದ್ದೇನು?
ಬೆಂಗಳೂರು: ತಮ್ಮ ವಿರುದ್ದ ಕೇಳಿ ಬಂದಿರುವ ಅಸಹಜ ಲೈಂಗಿಕ ಕಿರುಕುಳ ಬಗ್ಗೆ ಹಾಸನ ಎಂಎಲ್‌ಸಿ ಸೂರಜ್ ರೇವಣ್ಣ ಮಾತನಾಡಿದ್ದು, ತಮ್ಮ ವಿರುದ್ದ ಕೇಳಿ ಬಂದಿರುವ ಎಲ್ಲಾ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್ ಹೌಸ್ ನಲ್ಲಿ ಸೂರಜ್ ರೇವಣ್ಣ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ನನ್ನ ವಿರುದ್ದ ಎಲ್ಲಾ ರೀತಿಯಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ಎಲ್ಲವೂ ಕಾನೂನು ಪ್ರಕಾರ ತನಿಖೆಯಾಗಲಿ ಅಂಥ ಅವರು ಹೇಳಿದರು. ಇದಲ್ಲದೇ ನನ್ನ ವಿರುದ್ದ ದೂರು ನೀಡಿರುವ ಯುವಕನ ವಿರದ್ದ ಕೂಡ ದೂರು ದಾಖಲಾಗಿದ್ದು, ಎಲ್ಲವೂ ತನಿಖೆಯಿಂದ ಸತ್ಯ ಹೊರ ಬರಲಿ ಅಂಥ ಹೇಳುವೆ ಅಂತ ಅವರು ಹೇಳಿದರು.