ಬೆಂಗಳೂರು : ದಿನಗೂಲಿ ನೌಕರರ ಮೇಲೆ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಅಕ್ಕಮಹಾದೇವಿ ಸ್ಲಂನಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಮುನಿರತ್ನ ಅವರು ರಾಜಕೀಯ ಪ್ರಭಾವ ಬಳಸಿಕೊಂಡು ಮನೆಗಳನ್ನು ನೆಲಸ ಮಾಡಿಸಿದ್ದಾರೆ. ವಸಂತ್ ಕುಮಾರ್, ಚನ್ನಕೇಶವ, ನವೀನ್, ಕಿಟ್ಟಿ, ಗಂಗಾರಾಜು ಎಂಬುವರು ಮನೆ ನೆಲಸಮ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆಯಲ್ಲಿ 30-70 ಸಾವಿರ ರೂ. ಹಣ, 30 ಗ್ರಾಂ ಚಿನ್ನ ಮಣ್ಣು ಪಾಲಾಗಿದೆ. ಮುನಿರತ್ನ ಅವರು ರಾಜಕೀಯ ಪ್ರಭಾವ ಬಳಸಿ ಮನೆ ನೆಲಸಮ ಮಾಡಿಸಿದ್ದಾರೆ ಎಂದು ಆರೋಪಿಸಿ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.