ಹೈದರಾಬಾದ್ : ಟಾಲಿವುಡ್ ನಲನಚಿತ್ರ ನಿರ್ದೇಶಕಿ ಅಪರ್ಣಾ ಮಲ್ಲಾಡಿ (54) ಶುಕ್ರವಾರ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.
ಅಪರ್ಣಾ ಮಲ್ಲಾಡಿ ಅವರು ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅಪರ್ಣಾ ಮಲ್ಲಾಡಿ ಅವರು ‘ದಿ ಅನುಶ್ರೀ ಎಕ್ಸ್‌ಪರಿಮೆಂಟ್ಸ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ‘ಪೋಶ್ ಪೂರಿಸ್’ ವೆಬ್ ಸೀರಿಸ್ ಆಕೆಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಎರಡು ವರ್ಷಗಳ ಹಿಂದೆ ‘ಪೆಳ್ಳಿ ಕೂತುರು ಪಾರ್ಟಿ’ ಸಿನಿಮಾ ನಿರ್ದೇಶಿಸಿದ್ದರು. ಕೆಲವು ಚಿತ್ರಗಳಿಗೆ ಕಥೆ ಒದಗಿಸುವುದರೊಂದಿಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅಪರ್ಣಾ ಮಲ್ಲಾಡಿ ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.