ಕೊಪ್ಪಳ : ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ನಡೆದಿರುವ ಜಗಳ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರ್ಚಕ ವಿದ್ಯಾದಾಸ ಬಾಬಾ ಸ್ವಾಮೀಜಿ, ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಎನ್ನುವವರೇ ಹೀಗೆ ಕಿತ್ತಾಡಿಕೊಂಡಿರುವವರು ಎನ್ನಲಾಗಿದೆ.
ಆಂಜನೇಯ ಸ್ವಾಮಿಯ ಗರ್ಭಗುಡಿಯಲ್ಲಿಯೇ ಸ್ವಾಮೀಜಿಗಳ ಮಧ್ಯೆ ಜಗಳ ಶುರುವಾಗಿದ್ದು, ಬಳಿಕ ಇಬ್ಬರು ಹೊಡೆದಾಡಿಕೊಂಡಿದ್ದಾರೆ.ಆದರೆ ಪೂಜಾ ಸಮಯದಲ್ಲಿ ಅವಾಚ್ಯ ಪದ ಬಳಸಿ ನಿಂದನೆ ಮಾಡಲಾಗಿದೆ ಎಂದು ವಿದ್ಯಾದಾಸ ಬಾಬಾ ಅವರು ಆರೋಪ ಮಾಡಿದ್ದಾರೆ.
ಇನ್ನೂ ಇಬ್ಬರ ನಡುವೆ ವಾಗ್ವಾದ ಸುದ್ದಿ ಪೊಲೀಸರಿಗೆ ತಿಳಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿಸದ ವೇಳೇಯಲ್ಲಿ ಕೂಡ ಇಬ್ಬರು ಕೂಡ ಪೋಲಿಸರ ಮುಂದೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇಬ್ಬರ ಜಗಳದ ವಿಡಿಯೋ ಈಗ ವೈರಲ್ ಆಗಿದೆ.
ವಿದ್ಯಾದಾಸ ಬಾಬಾ ಸ್ವಾಮೀಜಿ ಗ್ರಾಮೀಣ ಪೊಲೀಸ್ ಠಾಣೆಗೆ ಘಟನೆ ಸಂಬಂಧಪಟ್ಟ ದೂರು ನೀಡಿದ್ದು, ದೂರಿನಲ್ಲಿ ನನಗೆ ದೇವಸ್ತಾನದಲ್ಲಿ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಅಂತ ತಿಳಿಸಿದ್ದಾರೆ.
ಅಂಜನಾದ್ರಿಯ ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್#kannada #KannadaNews #kannadareels pic.twitter.com/P73fIx8hf9
— meavinashr (ಅವಿನಾಶ್ ಆರ್ ಭೀಮಸಂದ್ರ) (@meavinashr) December 24, 2025








