ನವದೆಹಲಿ: ಫೆಮಾ ಪ್ರಕರಣದಲ್ಲಿ ಡಿಎಂಕೆ ಸಂಸದ ಎಸ್ ಜಗತ್ರಾಕ್ಷಕನ್ ಮತ್ತು ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ED) 908 ಕೋಟಿ ರೂ.ಗಳ ದಂಡ ವಿಧಿಸಿದೆ ಮತ್ತು 89 ಕೋಟಿ ರೂ.ಗಳ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಬುಧವಾರ ತಿಳಿಸಿದೆ.
ಜಾರಿ ನಿರ್ದೇಶನಾಲಯ ಎಕ್ಸ್ ಪೋಸ್ಟ್’ನಲ್ಲಿ ತಮಿಳುನಾಡು ಸಂಸದ ಮತ್ತು ಉದ್ಯಮಿ ಜಗತ್ರಕ್ಷಕನ್ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿತ ಭಾರತೀಯ ಸಂಸ್ಥೆಯ ವಿರುದ್ಧ ಚೆನ್ನೈನಲ್ಲಿ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ತನಿಖೆ ನಡೆಸಿತು. ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡ 89.19 ಕೋಟಿ ರೂ.ಗಳ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ ಎಂದು ತಿಳಿಸಿದೆ.
ಹೆಚ್ಚುವರಿಯಾಗಿ, ಸೋಮವಾರ ಹೊರಡಿಸಿದ ನ್ಯಾಯನಿರ್ಣಯ ಆದೇಶದ ಮೂಲಕ ಸುಮಾರು 908 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಅದು ಹೇಳಿದೆ.
BREAKING : 10 ರಾಜ್ಯಗಳಲ್ಲಿ 12 ‘ಕೈಗಾರಿಕಾ ಸ್ಮಾರ್ಟ್ ಸಿಟಿ’ಗಳ ಸ್ಥಾಪನೆಗೆ ‘ಕೇಂದ್ರ ಸರ್ಕಾರ’ ಅನುಮೋದನೆ
ಜಿಯೋಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ | Paris Paralympic Games 2024
“ಸುಸಂಸ್ಕೃತ ಸಮಾಜ ಸಹಿಸದ ದೌರ್ಜನ್ಯ” : ಕೋಲ್ಕತ್ತಾ ವೈದ್ಯೆ ಪ್ರಕರಣಕ್ಕೆ ಅಧ್ಯಕ್ಷೆ ‘ಮುರ್ಮು’ ಮೊದಲ ಪ್ರತಿಕ್ರಿಯೆ