ಅಹಮದಾಬಾದ್ : ಅಹಮದಾಬಾದ್-ವಡೋದರಾ ಎಕ್ಸ್ಪ್ರೆಸ್ವೇಯಲ್ಲಿ ಬುಧವಾರ ನಾಡಿಯಾಡ್ನಲ್ಲಿ ಕಾರು ಟ್ರೇಲರ್ ಟ್ರಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ.
ವಡೋದರಾದಿಂದ ಅಹಮದಾಬಾದ್ ಗೆ ತೆರಳುತ್ತಿದ್ದ ಎರ್ಟಿಗಾ ಕಾರು ಟ್ರೈಲರ್ ಟ್ರಕ್’ನ ಹಿಂದೆ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಕಾರಿನಲ್ಲಿದ್ದ ಎಲ್ಲಾ 10 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇನ್ನೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ವರದಿಯಾದ ಕೂಡಲೇ, ಎಕ್ಸ್ಪ್ರೆಸ್ ಹೆದ್ದಾರಿ ಗಸ್ತು ತಂಡದೊಂದಿಗೆ ಎರಡು ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING : ‘ದುರುಪಯೋಗ’ದ ಕುರಿತು ಕಳವಳ ; ಪಾಕಿಸ್ತಾನದಲ್ಲಿ ‘X'(ಟ್ವಿಟರ್) ನಿಷೇಧ
BREAKING : ಖ್ಯಾತ ಯೂಟ್ಯೂಬರ್ ಅಬ್ರದೀಪ್ ಸಹಾ ಅಲಿಯಾಸ್ ‘ಆಂಗ್ರಿ ರಾಂಟ್ಮನ್’ ನಿಧನ