ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಚಿರತೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ರಾತ್ರಿ ರೈತ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆ ದಾಳಿಯಲ್ಲಿ ಕಿರಿಯ ಸಹೋದರ ಬಿರೇಶ್ ಬಳಗಾವಿ (28) ಸಾವನ್ನಪ್ಪಿದ್ದು, ಹಿರಿಯ ಸಹೋದರ ಗಣೇಶ ಬಳಗಾವಿ (32) ಗಾಯಗೊಂಡಿದ್ದಾರೆ.