ದಾವಣಗೆರೆ : ರಾಜ್ಯದಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ದಾವಣರೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಕುಬೇರಪ್ಪ, ಸಂತೋಷ್ ಕುಮಾರ್, ವಿರೇಶ್, ಹನುಮಂತಪ್ಪ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 3,75,400 ರೂ.ಮೌಲ್ಯದ ಖೋಟಾ ನೋಟು, 1 ಬೈಕ್ ವಶಕ್ಕೆ ಪಡೆಯಲಾಗಿದೆ. ಚಿರಡೋಣಿಯ ಸಪ್ತಗಿರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಬಂಧಿಸಲಾಗಿದೆ.
ಬಂಧಿತರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಕುಬೇರಪ್ಪ ವಿಚಾರಣೆ ವೇಳೆ ಖೋಟಾ ನೋಟು ಚಲಾವಣೆ ಬೆಳಕಿಗೆ ಬಂದಿದೆ. ಹರಿಹರ, ಹೊಸಪೇಟೆ, ಮೈಸೂರಿನಲ್ಲಿ ನಕಲಿ ನೋಟಿ ಚಲಾವಣೆ ಮಾಡುತ್ತಿದ್ದರು. ಕಳೆದ ವರ್ಷ ಖೋಟಾ ನೋಟು ಕೇಸ್ ನಲ್ಲಿ ಜೈಲು ಸೇರಿದ್ದ ಆರೋಪಿ.ಕಳೆದ ಫೆಬ್ರವರಿಯಲ್ಲಿ ಜಾಮೀನು ಪಡೆದು ಕುಬೇರಪ್ಪ ಹೊರಬಂದಿದ್ದ. ಜೈಲಿನಿಂದ ಬಂದು ಮತ್ತೆ ಅದೇ ಕೆಲಸ ಮುಂದುವರೆಸಿದ್ದು, 35 ಸಾವಿರ ಅಸಲಿ ನೋಟಿಗೆ 1.35 ಲಕ್ಷ ಖೋಟಾ ನೋಟು ನೀಡಿದ್ದ. ಬಾರ್, ಪೆಟ್ರೋಲ್ ಬಂಕ್ ಸೇರಿ ವಿವಿಧೆಡೆ ನೋಟು ಚಲಾವಣೆ ಮಾಡುತ್ತಿದ್ದ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.