ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಚಾರ್ಜ್ಶೀಟ್ ಪ್ರಕಾರ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಒಟ್ಟು 38 ಪಿತೂರಿಗಾರರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 37ನೇ ಆರೋಪಿಯಾಗಿದ್ದಾರೆ.
ಚಾರ್ಜ್ಶೀಟ್ ಪ್ರಕಾರ, ಕೇಜ್ರಿವಾಲ್ ಕಿಂಗ್ ಪಿನ್ ಮತ್ತು ಪ್ರಮುಖ ಸಂಚುಕೋರ. ಗೋವಾ ಚುನಾವಣೆಯಲ್ಲಿ ಲಂಚದ ಹಣದ ಬಳಕೆಯ ಬಗ್ಗೆ ಅವರಿಗೆ ತಿಳಿದಿತ್ತು ಮತ್ತು ಭಾಗಿಯಾಗಿದ್ದರು. ಅರವಿಂದ್ ಕೇಜ್ರಿವಾಲ್ ಮತ್ತು ಆರೋಪಿ ವಿನೋದ್ ಚೌಹಾಣ್ ನಡುವಿನ ವಾಟ್ಸಾಪ್ ಚಾಟ್ನ ವಿವರಗಳನ್ನ ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಕವಿತಾ ಅವರ ಪಿಎ ಗೋವಾ ಚುನಾವಣೆಯ ಸಂದರ್ಭದಲ್ಲಿ ವಿನೋದ್ ಮೂಲಕ ಆಮ್ ಆದ್ಮಿ ಪಕ್ಷಕ್ಕೆ (AAP) 25.5 ಕೋಟಿ ರೂ.ಗಳನ್ನ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿನೋದ್ ಚೌಹಾಣ್ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂಬುದು ಚಾಟ್’ನಿಂದ ಸ್ಪಷ್ಟವಾಗಿದೆ.
Watch Video: ಬಾಹ್ಯಾಕಾಶಕ್ಕೆ ಚಿಮ್ಮಿದ ಯುರೋಪಿನ ಹೊಚ್ಚ ಹೊಸ ಏರಿಯನ್ -6 ನೌಕೆ
ಹುಬ್ಬಳ್ಳಿ ನೇಹಾ ಕೊಲೆ ಕೇಸ್ : ಹತ್ಯೆಗೆ ‘ಲವ್ ಜಿಹಾದ್’ ಕಾರಣವಲ್ಲ : ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!
ಸಿಎಂ ರಾಜೀನಾಮೆ, ನಿವೇಶನಗಳ ಹಂಚಿಕೆ ರದ್ದು, ಸಿಬಿಐ ತನಿಖೆಗೆ ‘B.Y ವಿಜಯೇಂದ್ರ ಆಗ್ರಹ’