ನವದೆಹಲಿ : ಮಾಜಿ ಬಾಯ್ ಫ್ರೆಂಡ್’ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಆಲಿಯಾರನ್ನು ಅಮೆರಿಕಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನ್ಯೂಯಾರ್ಕ್’ನ ಕ್ವೀನ್ಸ್ನಲ್ಲಿ ಕಳೆದ ತಿಂಗಳು ತನ್ನ ಮಾಜಿ ಗೆಳೆಯ ಮತ್ತು ಅವನ ಸ್ನೇಹಿತನ ಕೊಲೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಆಲಿಯಾ ಫಕ್ರಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಅಲಿಯಾ ಫಕ್ರಿ ಅವರು ಎರಡು ಅಂತಸ್ತಿನ ಗ್ಯಾರೇಜ್ಗೆ ಬೆಂಕಿ ಹಚ್ಚಿದ್ದು, ಉಸಿರಾಡಲು ಆಗದೇ ಒಳಗಿದ್ದಂತಹ ಎಡ್ವರ್ಡ್ ಜೇಕಬ್ಸ್ (35) ಮತ್ತು ಯುವತಿ ಅನಸ್ತಾಸಿಯಾ ಎಟಿಯೆನ್ನೆ (33) ಸಾವನ್ನಪ್ಪಿದ್ದರು. ಹೊಗೆ ಹೆಚ್ಚಾಗಿದ್ದರಿಂದ ಹೊರಗೆ ಬಾರಲು ಆಗದೇ ಬೆಂಕಿಯಿಂದ ಇಬ್ಬರು ಸಜೀವ ದಹನವಾಗಿದ್ದರು ಎಂದು ವರದಿಯಾಗಿದ್ದು, ಈ ಸಂಬಂಧ ಕೊಲೆ ಆರೋಪವಿದ್ದು, ಸದ್ಯ ಆಲಿಯಾ ಬಂಧಿಸಲಾಗಿದೆ.