ಬೆಂಗಳೂರು : ಬೆಂಗಳೂರಿನಲ್ಲಿ ದೃಶ್ಯ ಸಿನಿಮಾ ಸ್ಟೈಲ್ ನಲ್ಲಿ ಇಂಜಿನಿಯರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಂದು ಆರೋಪಿ ನಾಟಕವಾಡಿದ್ದ. ಆರೋಪಿಯು ಕೊಲೆ ಮಾಡಿ ಮೃತದೇಹವನ್ನು ಮನೆಯಲ್ಲಿ ಹೂತು ಹಾಕಿದ್ದ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಅತ್ತಿಬೆಲೆ ಪೊಲೀಸರು ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ (30) ಬರ್ಬರ ಕೊಲೆ ಮಾಡಿ ಮಾಡಲಾಗಿದೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ ಎನ್ನುವವರನ್ನು ಕೊಲೆ ಮಾಡಲಾಗಿದೆ. ಅತ್ತಿಬೆಲೆಯಲ್ಲಿ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಶ್ರೀನಾಥ್ ವಾಸವಿದ್ದರು. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್ ಶ್ರೀನಾಥ್ ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ ಪ್ರಭಾಕರ್ ಗೆ 40,00,000 ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್ ಗೆ ಕೇಳಿದ್ದಾನೆ.
ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹಣ ಕೊಡುತ್ತೇನೆ ಬಾ ಅಂತ ಹೇಳಿ ಆಂಧ್ರದ ಕುಪ್ಪಂಗೆ ಶ್ರೀನಾಥ್ ನನ್ನ ಕರೆಸಿಕೊಂಡಿದ್ದರು. ಕುಪ್ಪಂಗೆ ಹೋಗುವ ಮುನ್ನ ಶ್ರೀನಾಥ್ ಪತ್ನಿಗೆ ಹೇಳಿ ಹೋಗಿದ್ದರು ತಲೆಗೆ ಸುತ್ತಿನಿಂದ ಹೊಡೆದು ಮನೆಯಲ್ಲಿ ಗುಂಡಿ ತೋಡಿ ಆತನ ಮೃತ ದೇಹವನ್ನು ಹೂತು ಹಾಕಿದ್ದಾರೆ. ಇದಕ್ಕೆ ಪ್ರಭಾಕರ್ ಗೆ ಸ್ನೇಹಿತ ಜಗದೀಶ್ ಸಾತ್ ಕೊಟ್ಟಿದ್ದ.
ಶ್ರೀನಾಥ್ ಪತ್ನಿ ಪ್ರಭಾಕರನನ್ನು ತಿಳಿದಾಗ ಆತ ಬಂದಿಲ್ಲ ಅಂತ ನಾಟಕ ಮಾಡಿದ್ದಾನೆ ಎರಡು ದಿನವಾದರೂ ಮನೆಗೆ ಬಾರದಿದ್ದಾಗ ಪತ್ನಿ ಅತ್ತಿಬೆಲೆ ಠಾಣೆಗೆ ದೂರು ನೀಡಿದ್ದಾರೆ ಅತ್ತಿಬೆಲೆ ಪೊಲೀಸರು ಪ್ರಭಾಕರ್ ಮತ್ತು ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ ವಶಕ್ಕೆ ಪಡೆದು ವಿಚಾರನೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕುಪ್ಪನ್ನ ಮನೆಯಲ್ಲಿ ಹಣ ಹೂತು ಹಾಕಿರುವ ಕುರಿತು ಬಾಯಿಬಿಟ್ಟಿದ್ದಾರೆ.








