ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ರಾಜಧಾನಿ ದೆಹಲಿಯ ಭಾಟಿ ಗಣಿ ಪ್ರದೇಶದಲ್ಲಿ ನಡೆದ ಉನ್ನತ ಮಟ್ಟದ ಎನ್ಕೌಂಟರ್ನಲ್ಲಿ ಮೋಸ್ಟ್ ವಾಂಟೇಡ್ ಕ್ರಿಮಿನಲ್ ರೋಮಿಲ್ ನನ್ನು ಹತ್ಯೆ ಮಾಡಲಾಗಿದೆ.
ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರಿಯಾಣ ಎಸ್ಟಿಎಫ್ ನಡೆಸಿದ ಎನ್ಕೌಂಟರ್ನಲ್ಲಿ ಕುಖ್ಯಾತ ದರೋಡೆಕೋರ ರೋಮಿಲ್ ಬೊಹ್ರಾ ಎಂಬಾತನ ತಲೆಗೆ 3 ಲಕ್ಷ ರೂ. ಬಹುಮಾನವಿತ್ತು.
ಈ ಕಾರ್ಯಾಚರಣೆಯಲ್ಲಿ, ಇನ್ಸ್ಪೆಕ್ಟರ್ ಮತ್ತು ಎಸ್ಐ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡರು. ಗುಂಡು ಇಬ್ಬರ ಗುಂಡು ನಿರೋಧಕ ಜಾಕೆಟ್ಗಳಿಗೆ ತಗುಲಿ ದೊಡ್ಡ ಅನಾಹುತವೊಂದು ತಪ್ಪಿತು.
ದೆಹಲಿ-ಹರಿಯಾಣ ಗಡಿಯಲ್ಲಿ ಎನ್ಕೌಂಟರ್ : ಮೋಸ್ಟ್ ವಾಂಟೆಡ್ ಕ್ರಿಮಿನಲ್ `ರೋಮಿಲ್ ಬೊಹ್ರಾ’ ಹತ್ಯೆ | Romil Bohra