ಮುಂಬೈ : ಉದ್ಯಮಿ ಅನಿಲ್ ಅಂಬಾನಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ದಾಳಿ ನಡೆದ ಒಂದು ವಾರದ ನಂತರ, ಜಾರಿ ನಿರ್ದೇಶನಾಲಯವು ಆಗಸ್ಟ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಕಳೆದ ವಾರ ಉದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿತ್ತು. ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಕಮ್ಯುನಿಕೇಷನ್ನ ಸಾಲ ಖಾತೆಗೆ ಎಸ್ಬಿಐನಿಂದ ದೊಡ್ಡ ಹೊಡೆತ ಬಿದ್ದಿದೆ.
ಡಿಸೆಂಬರ್ 2023, ಮಾರ್ಚ್ 2024 ಮತ್ತು ಸೆಪ್ಟೆಂಬರ್ 2024 ರಲ್ಲಿ ಎಸ್ಬಿಐ ಕಂಪನಿಗೆ ಶೋಕಾಸ್ ನೋಟಿಸ್ಗಳನ್ನು ಕಳುಹಿಸಿತ್ತು. ಕಂಪನಿಯ ಉತ್ತರವನ್ನು ಪರಿಶೀಲಿಸಿದ ನಂತರ, ಅನಿಲ್ ಅಂಬಾನಿ ಅವರ ಕಂಪನಿಯು ತನ್ನ ಸಾಲದ ನಿಯಮಗಳನ್ನು ಪಾಲಿಸಿಲ್ಲ ಮತ್ತು ಅದರ ಖಾತೆಗಳ ಕಾರ್ಯಾಚರಣೆಯಲ್ಲಿನ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ ಎಂದು ಬ್ಯಾಂಕ್ ಹೇಳಿತ್ತು.