ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ, ಜಾರಿ ನಿರ್ದೇಶನಾಲಯದ ತಂಡವು ಮುಖ್ಯಮಂತ್ರಿ ನಿವಾಸಕ್ಕೆ ತಲುಪಿದೆ.
ತಂಡವು 12 ಅಧಿಕಾರಿಗಳನ್ನು ಒಳಗೊಂಡಿದೆ ಮತ್ತು ಅವರು ಶೋಧ ವಾರಂಟ್ನೊಂದಿಗೆ ನಿವಾಸದೊಳಗೆ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
#WATCH | Enforcement Directorate team reaches Delhi CM Arvind Kejriwal's residence for questioning: ED pic.twitter.com/kMiyVD6vhf
— ANI (@ANI) March 21, 2024
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊರಡಿಸಿದ ಕನಿಷ್ಠ ಎಂಟು ಸಮನ್ಸ್’ಗಳನ್ನ ತಪ್ಪಿಸಿಕೊಂಡಿದ್ದಾರೆ. ಸೋಮವಾರ, ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಏಜೆನ್ಸಿ ಹೊರಡಿಸಿದ ಸಮನ್ಸ್ ತಪ್ಪಿಸಿಕೊಂಡರು.