ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಚುನಾವಣಾ ಆಯೋಗ ಮಂಗಳವಾರ 24 ಗಂಟೆಗಳ ಕಾಲ ಪ್ರಚಾರದಿಂದ ನಿಷೇಧಿಸಿದೆ.
ಮಮತಾ ಬ್ಯಾನರ್ಜಿ ವಿರುದ್ಧ “ಅಮಾನವೀಯ” ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ಹೊರಡಿಸಿದ ಶೋಕಾಸ್ ನೋಟಿಸ್’ಗೆ ಕಲ್ಕತ್ತಾ ಹೈಕೋರ್ಟ್’ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಸೋಮವಾರ ತಮ್ಮ ಉತ್ತರವನ್ನ ಕಳುಹಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಗಂಗೋಪಾಧ್ಯಾಯ ವಿರುದ್ಧ ತೃಣಮೂಲ ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಮೇ 25ರಂದು ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಬಿಜೆಪಿ ಗಂಗೋಪಾಧ್ಯಾಯ ಅವರನ್ನ ಕಣಕ್ಕಿಳಿಸಿದೆ.
ಸಿಬಿಐ ಅಧಿಕಾರಿ ಹೆಸರು ಹೇಳಿಕಂಡು ವೈದ್ಯರಿಗೆ ಮೂರುವರೆ ಕೋಟಿ ವಂಚನೆ ಮಾಡಿದ ಸೈಬರ್ ವಂಚಕ!
Gold-Silver Rate Today 21 May 2024: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ! ಇಂದಿನ ದರದ ವಿವರ ಇಲ್ಲಿದೆ
‘ಮೊದಲು ಇಂಡಿಯಾ ಮೈತ್ರಿ ಮುರಿದು ಬಿದ್ದಿತು, ನಂತ್ರ ಕುಸಿಯಿತು ಮತ್ತು ಈಗ ಸಂಪೂರ್ಣವಾಗಿ ಸೋತಿದೆ’ : ಪ್ರಧಾನಿ ಮೋದಿ