ದಾವಣಗೆರೆ : ದಾವಣಗೆರೆ ಜಿಲ್ಲೆಯ ಜಗಳೂರು, ಕೂಡ್ಲಿಗಿ ಮತ್ತು ಚಳ್ಳಕೆರೆ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ನಿನ್ನೆ ಸಂಜೆ ಭಾರೀ ಸದ್ದಿನೊಂದು ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ನಿನ್ನೆ ಸಂಜೆ 7.30ರ ವೇಳೆ ಭಾರೀ ಸದ್ದಿನೊಂದಿಗೆ ಭೂ ಕಂಪನದ ಅನುಭವವಾಗಿದ್ದು ಮನೆಗಳು ಕ್ಷಣಕಾಲ ಅಲ್ಲಾಡಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದ್ದಿದ್ದು ರಾತ್ರಿ 9 ಗಂಟೆಯವರೆಗೂ ಮನೆಯ ಹೊರಗೆ ಇದ್ದರು.
ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ ಚಿರಂಜೀವಿ ಸೇರಿದಂತೆ ಹಲವು ಕಡೆ ಭಾರೀ ಸದ್ದು ಕೇಳಿ ಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.








