ನವದೆಹಲಿ : ಜನವರಿ 1ರಿಂದ ಥೈಲ್ಯಾಂಡ್ ಇ-ವೀಸಾ ಘೋಷಿಸಿದ್ದು, ಭಾರತೀಯರಿಗೆ 60 ದಿನಗಳ ವೀಸಾ ವಿನಾಯಿತಿಯನ್ನ ಘೋಷಿಸಿದೆ.
ಹೌದು, ಜನವರಿ 1, 2025 ರಿಂದ, ಥೈಲ್ಯಾಂಡ್ ಭಾರತದ ಪ್ರವಾಸಿಗರು ಸೇರಿದಂತೆ ವೀಸಾ-ವಿನಾಯಿತಿ ಪ್ರಯಾಣಿಕರಿಗೆ ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ (ಇಟಿಎ) ವ್ಯವಸ್ಥೆಯನ್ನು ಹೊರತರಲಿದೆ.
ಥಾಯ್ ಪ್ರಜೆಗಳಲ್ಲದ ಅರ್ಜಿದಾರರು https://www.thaievisa.go.th ವೆಬ್ಸೈಟ್ ಮೂಲಕ ಎಲ್ಲಾ ವೀಸಾ ಪ್ರಕಾರಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಥಾಯ್ ರಾಯಭಾರ ಕಚೇರಿ ನೋಟಿಸ್ನಲ್ಲಿ ತಿಳಿಸಿದೆ. ಅರ್ಜಿದಾರರು ತಮ್ಮ ಅರ್ಜಿಗಳನ್ನು ಸ್ವತಃ ಅಥವಾ ಪ್ರತಿನಿಧಿಯ ಮೂಲಕ ಸಲ್ಲಿಸಬಹುದು.
ಪ್ರವಾಸೋದ್ಯಮ ಮತ್ತು ಸಣ್ಣ ವ್ಯವಹಾರ ಉದ್ದೇಶಗಳಿಗಾಗಿ ಭಾರತೀಯ ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವವರಿಗೆ 60 ದಿನಗಳ ವೀಸಾ ವಿನಾಯಿತಿ ಮುಂದಿನ ಸೂಚನೆಯವರೆಗೆ ಜಾರಿಯಲ್ಲಿರುತ್ತದೆ ಎಂದು ರಾಯಭಾರ ಕಚೇರಿ ದೃಢಪಡಿಸಿದೆ.
Watch Video : ಪತ್ರಕರ್ತನ ಮೇಲೆ ತೆಲುಗು ನಟ ‘ಮೋಹನ್ ಬಾಬು’ ಹಲ್ಲೆ, ಪ್ರಕರಣ ದಾಖಲು
ಪ್ರತಿದಿನ ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ?