ರಾಯಚೂರು: ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂತ್ರಾಲಯದಲ್ಲಿ ಧರ್ಮಪತ್ನಿಯ ಸಮೇತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಕಲ್ಪ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗೇ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂದು ಮಂತ್ರಾಲಯದಲ್ಲಿ ಧರ್ಮಪತ್ನಿಯ ಸಮೇತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವ ಸೌಭಾಗ್ಯ ಲಭಿಸಿತು. ಈ ಪವಿತ್ರ ಕ್ಷಣದಲ್ಲಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಮತ್ತು ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ ಪ್ರಾರ್ಥಿಸಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶ್ರೀ ಸುಬುಧೇಂದ್ರ ಶ್ರೀಗಳ ಆಶಿರ್ವಾದ ಪಡೆದು ಫಲ-ಮಂತ್ರಾಕ್ಷತೆಗಳನ್ನು ಪಡೆದರು. ಈ ವೇಳೆ ಡಿಸಿಎಂ ಅವರಿಗೆ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಸನ್ಮಾನಿಸಿದರು. ಗುರು ರಾಯರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹಲವುಬಾರಿ ಮಂತ್ರಾಲಯಕ್ಕೆ ಬಂದು ಗುರು ರಾಘವೆಂದ್ರ ಸ್ವಾಮಿಗಳ ದರ್ಶನ ಪಡೆಯಬೇಕು ಎಂದುಕೊಂಡಿದ್ದೆ. ಅನೇಕ ಸಲ ನನಗೆ ಆಹ್ವಾನವೂ ಇತ್ತು. ಆದರೆ ಸಾಧ್ಯವಾಗಿರಲಿಲ್ಲ. ಇಂದು ಕುಟುಂಬ ಸಮೇತ ಬಂದು ರಾಯರ ದರ್ಶನ ಪಡೆಯುವ ಭಾಗ್ಯ ಸಿಕ್ಕಿದೆ. ಇದು ನನ್ನ ಸೌಭಾಗ್ಯ. ಎಲ್ಲದಕ್ಕೂ ಗುರು ರಾಯರ ಅನುಗ್ರಹ ಬೇಕು ಎಂದು ಹೇಳಿದ್ದಾರೆ.
ರಾಯರಿದ್ದಾರೆ..
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||ಇಂದು ಮಂತ್ರಾಲಯದಲ್ಲಿ ಧರ್ಮಪತ್ನಿಯ ಸಮೇತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವ ಸೌಭಾಗ್ಯ ಲಭಿಸಿತು. ಈ ಪವಿತ್ರ ಕ್ಷಣದಲ್ಲಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಮತ್ತು ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ… pic.twitter.com/K1rrNlhZUx
— DK Shivakumar (@DKShivakumar) October 22, 2025