ನವದೆಹಲಿ : ಸುಧೀರ್ಘ ಚರ್ಚೆಯ ನಂತರ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ ಪಕ್ಷ ಕೂಡ ವಕ್ಫ್ ಮಸೂದೆಗೆ ಬೆಂಬಲ ನೀಡಿತು.
ವಕ್ಫ್ ಮಸೂದೆಗೆ ಬೆಂಬಲ ನೀಡಿದ್ದಕ್ಕೆ ಜೆಡಿಯುನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಜೆಡಿಯುನ ಮೂವರು ಮುಸ್ಲಿಂ ನಾಯಕರು ರಾಜೀನಾಮೆ ನೀಡಿದ್ದಾಎ. ಜೆಡಿಯುನಿಂದ ಡಾ. ಮೊಹಮ್ಮದ್ ಖಾಸಿಂ ಅನ್ಸಾರಿ ನಂತರ, ಶಹನವಾಜ್ ಮಲಿಕ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ವಕ್ಫ್ ಮಸೂದೆಗೆ ಬೆಂಬಲ ನೀಡಿದ್ದರ ಬಗ್ಗೆ ಅಸಮಾಧಾನವೇ ಅವರು ರಾಜೀನಾಮೆ ನೀಡಲು ಕಾರಣ ಎಂದು ಹೇಳಿದ್ದಾರೆ.