ಧರ್ಮಸ್ಥಳ : ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐಟಿ ಅಧಿಕಾರಿಗಳು ದೂರುದಾರ ತೋರಿಸಿದ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದ್ದು, ‘ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್ ಐ ಟಿ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ತಜ್ಞರ ಜೊತೆ ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸಭೆ ನಡೆಸಿದ್ದು, ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ತಜ್ಞರಿಂದ ಸಲಹೆ ಪಡೆದಿದ್ದಾರೆ. ಭೂಮಿ ಅಗೆಯುವ ಬದಲು ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್ ಐ ಟಿ ಸಿದ್ದತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ದೂರುದಾರನ ಪರವಾಗಿ ಸ್ಥಳೀಯ 6 ಜನರು ಇದೀಗ ಎಸ್ಐಟಿ ಮುಂದೆ ಹಾಜರಾಗಿದ್ದಾರೆ.
ಸ್ಥಳೀಯ 6 ಜನರು ಬಾಲಕಿಯ ಶವ ಹೂತಿರುವುದನ್ನು ನೋಡಿದ್ದಾಗಿ ಸಾಕ್ಷಿ ಹೇಳಲು ಇದೀಗ SIT ಮುಂದೆ ಬಂದಿದ್ದಾರೆ. ಶೋಧ ಕಾರ್ಯಕ್ಕೆ ಸಹಾಯ ಮಾಡುತ್ತೇವೆ ಎಂದು ಆಗಮಿಸಿದ್ದಾರೆ ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳು ಇನ್ನೂ ಕೂಡ ಖಚಿತಪಡಿಸಿಲ್ಲ ಆರು ಜನರ ಹೇಳಿಕೆ ಸತ್ಯಾಸತ್ಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಅಧಿಕಾರಿಗಳು ಇದುವರೆಗೂ ಇದನ್ನು ಖಚಿತಪಡಿಸಿಲ್ಲ.