ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾನುವಾರದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಇದೀಗ ಧರ್ಮಸ್ಥಳದಲ್ಲಿ ಹೆಣ ಹೂತ ಜಾಗ, ಶೋಧ ಕಾರ್ಯ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ ಸ್ಥಳಗಳ ಪೈಕಿ ಶೋಧ ಆದ 10 ಪಾಯಿಂಟ್ ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. 10 ಪಾಯಿಂಟ್ ಗಳ ಪೈಕಿ ಮೂರು ಪಾಯಿಂಟ್ ಗಳಲ್ಲಿ ಗನ್ ಮ್ಯಾನ್ ನಿಯೋಜಿಸಲಾಗಿದೆ.
ಅನಾಮಿಕ ಶವಗಳನ್ನು ಹೂಳಿದ್ದರ ಬಗ್ಗೆ ತಪ್ಪೊಪ್ಪಿಕೊಂಡ ನಂತ್ರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಎಸ್ಐಟಿಯಿಂದ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್ಐಟಿ ಧರ್ಮಸ್ಥಳದ 6ನೇ ಪಾಯಿಂಟ್ ಶೋಧ ಕಾರ್ಯದ ಸಂದರ್ಭದಲ್ಲಿ 12 ಮೂಳೆಗಳು ದೊರೆತಿದ್ದವು. ತಲೆ ಬುರುಡೆ ಚೂರುಗಳು, ಕೈ ಮೂಳೆಗಳು ಸೇರಿದಂತೆ 12 ಮೂಳೆಗಳ ಪೀಸ್ ಗಳು ಸಿಕ್ಕಿದ್ದವು. ಇವುಗಳನ್ನು ಎಸ್ಐಟಿ ತಂಡವು ಪರಿಶೀಲನೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದೊರೆತಂತ ಮೂಳೆಗಳು ಯಾರವು ಎನ್ನುವ ಕುರಿತಂತೆ ಸಂಶೋಧನೆಯನ್ನು ವೈದ್ಯರ ತಂಡವು ನಡೆಸಲಿದೆ.