ಮಂಗಳೂರು: ಧರ್ಮಸ್ಥಳದಲ್ಲಿ ಗಲಾಟೆ ಬೆನ್ನಲ್ಲೇ ಇದೀಗ ಧರ್ಮಸ್ಥಳದಲ್ಲಿ ಶವಹೂತಿಟ್ಟಿರುವ ಪ್ರಕರಣದ ದೂರುದಾರ ತನಗೆ ಗನ್ ಮ್ಯಾನ್ ಭದ್ರತೆ ನೀಡುವಂತೆ ಎಸ್ ಐಟಿಗೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣದ ಬೆನ್ನಲ್ಲೇ ದೂರುದಾರ ತನ್ನ ಮೇಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ತನಗೆ ಗನ್ ಮ್ಯಾನ್ ಭದ್ರತೆ ಒದಗಿಸುವಂತೆ ಮನವಿ ಮಾಡಿದದಗಿ ದೂರುದಾರ ಪರ ವಕೀಲರು ಎಸ್ ಐಟಿ ತಂಡಕ್ಕೆ ಲಿಖಿತ ಮನವಿ ಮಾಡಿದ್ದಾರೆ.
ಶೋಧಕಾರ್ಯ ಮುಕ್ತಾಯವಾದ ಬಳಿಕವೂ ತನಗೆ ಗನ್ ಮ್ಯಾನ್ ಭದ್ರತೆ ಕಲ್ಪಿಸುವಂತೆ ಎಸ್ ಐಟಿ ಎಸ್ ಪಿ ಜಿತೇಂದ್ರ ದಯಾಮ್ ಮುಂದೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಶೋಧಕಾರ್ಯ ಮುಂದುವರೆಸಿಲ್ಲ. ದೂರುದಾರನಿಗೆ ಭದ್ರತೆ ಒದಗಿಸಿದ ಬಳಿಕ ಶೋಧಕಾರ್ಯ ಮುಂದುವರೆಯಲಿದೆ.