ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಏಪ್ರಿಲ್ 23 ರವರೆಗೆ ವಿಸ್ತರಿಸಿದೆ.
Rouse Avenue Court of Delhi extends the Judicial custody of Delhi CM Arvind Kejriwal till April 23, 2024, in the Excise Policy money laundering case. pic.twitter.com/a2ibBvmpVo
— ANI (@ANI) April 15, 2024
ಈ ಹಿಂದೆ ನೀಡಲಾದ ಕಸ್ಟಡಿ ಅವಧಿ ಮುಗಿದ ನಂತರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಕೇಂದ್ರ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಸೋಮವಾರ ಕೇಜ್ರಿವಾಲ್ ಅವರ ಕಸ್ಟಡಿಯನ್ನ ವಿಸ್ತರಿಸಿದರು. ತನಿಖೆ ನಿರ್ಣಾಯಕ ಹಂತದಲ್ಲಿದೆ ಎಂದು ಹೇಳಿದ ಇಡಿ ಕೇಜ್ರಿವಾಲ್ ಅವರ ಕಸ್ಟಡಿಯನ್ನ ವಿಸ್ತರಿಸಲು ಕೋರಿತು.
BREAKING : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣ : ‘ED’ಗೆ ಸುಪ್ರೀಂಕೋರ್ಟ್ ನೋಟಿಸ್