ನವದೆಹಲಿ : ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ಈ ವೇಳೆ ನ್ಯಾಯಾಲಯವು 1 ಲಕ್ಷ ರೂ.ಗಳ ಜಾಮೀನು ಬಾಂಡ್ ಸಲ್ಲಿಸುವಂತೆ ಆದೇಶಿಸಿತು.

ರೂಸ್ ಅವೆನ್ಯೂ ನ್ಯಾಯಾಲಯದ ರಜಾಕಾಲದ ನ್ಯಾಯಾಧೀಶ ನ್ಯಾಯ್ ಬಿಂದು ಅವರು ಈ ಆದೇಶವನ್ನು ಕಾಯ್ದಿರಿಸಿದ ನಂತರ ಈ ಆದೇಶವನ್ನ ಹೊರಡಿಸಿದ್ದಾರೆ.

ಮತ್ತೊಂದೆಡೆ, ಜಾರಿ ನಿರ್ದೇಶನಾಲಯ (ED) ಆದೇಶಕ್ಕೆ ತಡೆಯಾಜ್ಞೆ ಕೋರಿತು ಮತ್ತು ಜಾಮೀನು ಬಾಂಡ್ಗೆ ಸಹಿ ಹಾಕಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನ ಕೋರಿತು. ಇದರಿಂದ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಆದಾಗ್ಯೂ, ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಜಾಮೀನು ಬಾಂಡ್’ನ್ನ ಶುಕ್ರವಾರ ಕರ್ತವ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು.

 

https://x.com/ANI/status/1803797556331172262

 

ಇಂದು ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯ ಹೈಲೆಟ್ಸ್‌ ಇಲ್ಲಿದೆ

ಸ್ವ-ಸಹಾಯ ಗುಂಪುಗಳಿಗೆ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Share.
Exit mobile version