ನವದೆಹಲಿ : ಇಂದು ನವದೆಹಲಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಇಂದು ನವದೆಹಲಿಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ತೆಲಂಗಾಣದ ಇತರ ನಾಯಕರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ನಾಯಕತ್ವದಲ್ಲಿ, ತೆಲಂಗಾಣ ಮತ್ತು ಕರ್ನಾಟಕ ಎರಡೂ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿವೆ – ಗ್ಯಾರಂಟಿಗಳನ್ನು ತಲುಪಿಸುವುದು, ದಾಖಲೆಯ ಬೆಳವಣಿಗೆಯನ್ನು ಹೆಚ್ಚಿಸುವುದು ಮತ್ತು ಜನ-ಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡುವುದು ಎಂದು ಹೇಳಿದ್ದಾರೆ.