ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಎಸ್ಕಾಂಗಳ ಆದಾಯ ಅಂತರ ಸರಿದೂಗಿಸಲು ಜನರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದಬಂದಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ತಮ್ಮ 4,620 ಕೋಟಿ ರೂ.ಗಳ ಆದಾಯದ ಅಂತರವನ್ನು ತುಂಬಲು ವಿದ್ಯುತ್ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್ ನಿಯಂ ತ್ರಣ ಆಯೋಗದಿಂದ (ಕೆಇ ಆರ್ಸಿ) ತಿದ್ದುಪಡಿ ಕೋರಿದೆ.
ತಮ್ಮ ಆದಾಯದ ಅಂತರವನ್ನು ಸರಿದೂಗಿಸಲು ಎಸ್ಕಾಂಗಳು ಮಾರ್ಚ್ 23, 2025 ರಂದು ಮೊದಲ ಬಾರಿಗೆ KERC ಮುಂದೆ ಮೇಲ್ಮನವಿ ಸಲ್ಲಿಸಿದವು. ಈ ಕುರಿತ ಚರ್ಚೆಯನ್ನು ಜುಲೈ 8 ರಂದು ನಡೆಸಲಾಯಿತು. 30 ದಿನಗಳ ಒಳಗೆ ಎಲ್ಲಾ ಪಾಲುದಾರರಿಂದ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಮತ್ತು ಅಫಿಡವಿಟ್ ಮೂಲಕ ಆಯೋಗಕ್ಕೆ ವಿವರಗಳನ್ನು ಸಲ್ಲಿಸಲು ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಅನುಮತಿ ನೀಡಿದೆ.