ಬೆಂಗಳೂರು : ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು ಶೀಘ್ರದಲ್ಲಿಯೇ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಹೌದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ವಿದ್ಯುತ್ ದರ ಏರಿಕೆಗೆ ಸಿದ್ಧತೆ ನಡೆಸಿದೆ. ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಪ್ರತಿ ಯೂನಿಟ್ ಗೆ 50 ಪೈಸೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳು 2025-26ನೇ ಸಾಲಿನ ವಿದ್ಯುತ್ದರವನ್ನು ಪರೀಷ್ಕರಿಸಿ ಯೂನಿಟ್ ಗೆ ಸರಾಸರಿ 68 ಪೈಸೆ ಹೆಚ್ಚಳ ಮಾಡುವಂತೆ ಕೋರಿವೆ. ಆಯೋಗವು 14-18ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಏಪ್ರಿಲ್ 1ರಿಂದ ಅದು ಯೂನಿಟ್ ಗೆ 35 ಪೈಸೆ ಹೆಚ್ಚಳವಾಗಲಿದೆ. ಇನ್ನುಈ 35 ಪೈಸೆ ಹಾಗೂ ಈಗ ಪರಿಷ್ಕರಣೆಯಾಗಲಿರುವ ದರ ಎರಡೂ ಸೇರಿ ಯೂನಿಟ್ ಗೆ 50 ಪೈಸೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.








