ಬೆಂಗಳೂರು : ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದಿದ್ದಾರೆ. ಘಟನೆ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಸುಗಳ ಮಾಲೀಕರಿಗೆ 1 ಲಕ್ಷ ರೂ.ಪರಿಹಾರ ಘೋಷಿಸಿರುವ ಆರ್. ಅಶೋಕ್ ಅವರು, ಪಶು ಆಸ್ಪತ್ರೆ ಉಳಿವಿಗಾಗಿ ಈ ಹಿಂದೆ ಹೋರಾಟ ಮಾಡಲಾಗಿತ್ತು. ಆ ಹೋರಾಟದಲ್ಲಿ ಈ ಹಸುಗಳು ಕೂಡ ಭಾಗಿಯಾಗಿದ್ದವು. ಬ್ರಿಟಿಷರ ಕಾಲದಿಂದಲೂ ಇರುವ ಪಶು ಆಸ್ಪತ್ರೆ ಉಳಿವಿಗಾಗಿ ನಡೆದಿದ್ದ ಬೃಹತ್ ಹೋರಾಟಕ್ಕೆ ಈ ಹಸುಗಳನ್ನು ಬಳಸಿಕೊಂಡಿದ್ದರಿಂದ ಇಂದು ಮೂಕಪ್ರಾಣಿಗಳಾಗಿರುವ ಈ ಹಸುಗಳ ಮೇಲೆ ದುಷ್ಕೃತ್ಯವೆಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳನ್ನು ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಸದ್ಯಕ್ಕೆ ಚಾಮರಾಜಪೇಟೆಯ ಬಸವ ಆಸ್ಪತ್ರೆಯಲ್ಲಿ ಮೂರು ಹಸುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಮೂರು ಹಸುಗಳ ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಮನುಷ್ಯರಿಗೆ ಒಂದು ಸಾರಿ ಸೂಜಿ ಚುಚ್ಚಿದರು ಸಾಕು ನೋವು ಎಂದು ಕಿರುಚಿ ಹೇಳುತ್ತೇವೆ. ಆದರೆ ಪಾಪ ಮಾತು ಬರದೇ ಇರುವಂತಹ ಮೂಕಪ್ರಾಣಿಗಳ ಕೆಚ್ಚಲು ಕೊಯ್ಯುವಾಗ ಎಷ್ಟು ವೇದನೆ ಅನುಭವಿಸಲಿಲ್ಲ? ಸದ್ಯ ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ವಿಕೃತಿ ಮೆರೆದ ಪಾಪಿಗಳನ್ನು ಒದ್ದು ಒಳಗೆ ಹಾಕಿ ಎಂದು ಸ್ಥಳೀಯ ನಿವಾಸಿಗಳು ಕಿಡಿ ಕಾರಿದ್ದಾರೆ.