ನವದೆಹಲಿ : ಫೆಬ್ರವರಿ 14ರಂದು ಲಕ್ನೋದಲ್ಲಿ ನಡೆಯಲಿರುವ ತಮ್ಮ ಸೋದರ ಸೊಸೆಯ ಮದುವೆಯಲ್ಲಿ ಭಾಗವಹಿಸಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯ ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ.
Delhi excise policy case | Rouse Avenue Court grants 3 days interim bail to Manish Sisodia to attend his niece's wedding function at Lucknow from February 13 to 15.
— ANI (@ANI) February 12, 2024
ಫೆಬ್ರವರಿ 14 ರಂದು ಲಕ್ನೋದಲ್ಲಿ ನಡೆಯಲಿರುವ ತನ್ನ ಸೋದರ ಸೊಸೆಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಕೋರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಮನವಿಯ ಮೇಲಿನ ಆದೇಶವನ್ನ ರೂಸ್ ಅವೆನ್ಯೂ ನ್ಯಾಯಾಲಯ ವಿಚಾರಣೆ ನಡೆಸಿತು. ಇಂದು ಸಂಜೆ 4 ಗಂಟೆಗೆ ಆದೇಶ ಪ್ರಕಟಿಸಿದೆ.