ಚೆನ್ನೈ : ತಮಿಳುನಾಡಿನ ಕರೂರಿನ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರ್ಯಾಲಿಯಲ್ಲಿ ಕಲ್ಲು ತೂರಾಟ, ಪೊಲೀಸ್ ಲಾಠಿ ಚಾರ್ಜ್ ನಡೆದಿದೆ ಎಂದು ಆರೋಪಿಸಿ ವಿಜಯ್ ಅವರ ಟಿವಿಕೆ ನ್ಯಾಯಾಲಯಕ್ಕೆ ಮೊರೆ ಹೋಗಿದೆ.
ರ್ಯಾಲಿಯಲ್ಲಿ ಕಲ್ಲು ತೂರಾಟ, ಪೊಲೀಸ್ ಲಾಠಿ ಚಾರ್ಜ್ ಮಾಡಲಾಗಿದ್ದು, ಕಾಲ್ತುಳಿತದ ಹಿಂದೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿ ವಿಜಯ್ ಅವರ ಟಿವಿಕೆ ಪಕ್ಷ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.
ಈ ದುರಂತವು ಕೇವಲ ಅಪಘಾತವಲ್ಲ, ಬದಲಾಗಿ “ಪಿತೂರಿಯ” ಪರಿಣಾಮ ಎಂದು ಪಕ್ಷ ಆರೋಪಿಸಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದರು, ಸಭೆಯ ಮೇಲೆ ಕಲ್ಲುಗಳನ್ನು ಎಸೆಯಲಾಯಿತು ಮತ್ತು ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಕೆರಳಿಸಲಾಗಿದೆ ಎಂಬ ಆರೋಪಗಳನ್ನು ಟಿವಿಕೆ ತನ್ನ ಅರ್ಜಿಯಲ್ಲಿ ಎತ್ತಿ ತೋರಿಸುವ ನಿರೀಕ್ಷೆಯಿದೆ.
VIDEO | Karur: The stampede incident that occurred at actor-politician Vijay's rally on Saturday resulted in at least 39 fatalities, including 17 women and 9 children.
Visuals from the burial ground, opposition to the Kurur cremation place.
(Full video available on PTI Videos-… pic.twitter.com/VCmwEqzJM4
— Press Trust of India (@PTI_News) September 28, 2025