ಬೆಂಗಳೂರು : ಮಾರ್ಚ್ 4 ರ ನಾಳೆ 6.00 ಗಂಟೆಗೆ ಅರಮನೆ ರಸ್ತೆಯ ಸಿ.ಐ.ಡಿ. ಕಛೇರಿ ಮುಂಭಾಗದಲ್ಲಿರುವ “ಹೋಟೆಲ್ ಯಾಡಿಸನ್ ಬ್ಲೂ (ಏಟ್ರಿಯಾ)” ಇಲ್ಲಿ ಕರೆಯಲಾಗಿದ್ದ ‘ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ’ಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ದಿನಾಂಕ: 04-03-2025ರ ಮಂಗಳವಾರದಂದು ಕರೆಯಲಾಗಿದ್ದ ಸಭೆಯನ್ನು ದಿನಾಂಕ 10-03-2025ರ ಸೋಮವಾರ ಸಂಜೆ 6.00 ಗಂಟೆಗೆ ಅರಮನೆ ರಸ್ತೆಯ ಸಿ.ಐ.ಡಿ. ಕಛೇರಿ ಮುಂಭಾಗದಲ್ಲಿರುವ “ಹೋಟೆಲ್ ಲ್ಯಾಡಿಸನ್ ಬ್ಲೂ (ಏಟ್ರಿಯಾ)” ಇಲ್ಲಿ ಕರೆಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ತಿಳಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್. ಭೋಸರಾಜು ರವರು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.