ನವದೆಹಲಿ : ಶನಿವಾರ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಸಾಧ್ಯತೆಯಿದೆ. ವಿವಿಧ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ 55 ರಿಂದ 62 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿವೆ.
ಕಾಂಗ್ರೆಸ್ ಭರ್ಜರಿ ಜಯ ಗಳಿಸಿ ಅಧಿಕಾರದಲ್ಲಿರುವ ಬಿಜೆಪಿಯನ್ನ ಕಿತ್ತೊಗೆಯಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಅಂದ್ಹಾಗೆ, ಸರ್ಕಾರ ರಚಿಸಲು 46 ಸ್ಥಾನಗಳ ಬಹುಮತ ಅಗತ್ಯವಿದೆ.
ಅಂದ್ಹಾಗೆ, ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126ಎ ನಿಬಂಧನೆಗಳ ಅಡಿಯಲ್ಲಿ ಚುನಾವಣಾ ಆಯೋಗ (ಇಸಿ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಮಾಧ್ಯಮಗಳು, ಮತದಾನ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಕ್ಟೋಬರ್ 5 ರಂದು ಸಂಜೆ 6 ಗಂಟೆಯ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಟಣೆ ಅಥವಾ ಪ್ರಸಾರ ಮಾಡಬಹುದು.
ಇರಾನ್’ನಿಂದ ‘ಹಿಜ್ಬುಲ್ಲಾ’ಗೆ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ‘ಇಸ್ರೇಲ್’ ಅಡ್ಡಿ : ವರದಿ
ಮೃತ ಪಟ್ಟ ವ್ಯಕ್ತಿ ಮತ್ತದೇ ಕುಟುಂಬದಲ್ಲಿ ಜನಿಸ್ತಾನಂತೆ ; ಇದ್ಯಾಕೆ ಸಂಭವಿಸುತ್ತೆ ಗೊತ್ತಾ?