ಬೆಂಗಳೂರು : ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗ ಸೈಟ್ ಹಿಂದುರಿಗಿಸಿ ಪತ್ರ ಬರೆದಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಪತ್ರಿಕ್ರಿಯೆ ನೀಡಿದ್ದಾರೆ.
ರವೀಂದ್ರ ಕಲಾ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನ್ನ ಪತ್ನಿಯ ಜಮೀನನ್ನು ಮುಡಾದವರು ಸ್ವಾಧೀನಪಡಿಸಿಕೊಂಡಿದ್ದರು. ಅದಕ್ಕೆ ಬದಲಿ ನಿವೇಶನ ಕೊಡಿ ಎಂದು ಮುಡಾಗೆ ಕೇಳಿದ್ದೇವು ಆದರೆ ಮುಡಾದವರು ದರೆ ಮುಡಾದವರು ವಿಜಯನಗರದಲ್ಲೇ ಸೈಟ್ ಕೊಟ್ಟಿದ್ದರು. ಆದರೆ ನನ್ನ ಪತ್ನಿ ಸೈಟ್ ವಾಪಸ್ ಕೊಟ್ಟಿದ್ದಾರೆ ಎಂಧರು.
ತನ್ನ ಪತಿಗೆ ತೇಜೋವಧೆ, ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಹೀಗಾಗಿ ಸೈಟ್ ಬೇಡ ಎಂದು ಮನನೊಂದು ನಿವೇಶನವನ್ನು ನನ್ನ ಪತ್ನಿ ಪಾರ್ವತಿ ಮುಡಾಗೆ ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.