ಬೆಂಗಳೂರು : ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮತ್ತು ಮಾಜಿ ದೇವದಾಸಿಯರ ಸಮಗ್ರ ಪುನರ್ವಸತಿಗಾಗಿ ಕರ್ನಾಟಕದಲ್ಲಿ ಮರು ಸಮೀಕ್ಷೆ ನಡೆಸಲು ಹಲವು ಸಂಸ್ಥೆಗಳು ಮತ್ತು ರಾಜಕಾರಣಿಗಳು ಒತ್ತಾಯಿಸಿದ್ದಾರೆ. ಇದಕ್ಕಾಗಿ, 45 ವರ್ಷಗಳ ವಯಸ್ಸಿನ ಮಿತಿಯನ್ನು ಕೈಬಿಟ್ಟು, ಎಲ್ಲಾ ವಯಸ್ಸಿನ ದೇವದಾಸಿಯರನ್ನು ಒಳಗೊಳ್ಳಬೇಕು ಮತ್ತು ಸಮೀಕ್ಷೆಯನ್ನು ಮನೆ-ಮನೆಗೆ ತೆರಳಿ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ದೇವದಾಸಿಯರ ಮರು ಸಮೀಕ್ಷೆಗೆ ನಿರ್ಧರಿಸಿದ್ದು, ಇಂದು ಸಿಎಂ ಚಾಲನೆ ನೀಡಿದರು.ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ @siddaramaiah ಅವರು ಚಾಲನೆ ನೀಡಿದರು. pic.twitter.com/lBaYMp5DPa
— CM of Karnataka (@CMofKarnataka) September 4, 2025