ಬೆಂಗಳೂರು : ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ನಾಡಿನ ಜನತೆಗೆ ಯೋಗ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುವುದರ ಜೊತೆಗೆ ವ್ಯಕ್ತಿಯನ್ನು ಸದಾ ಚೈತನ್ಯಯುತವಾಗಿರುವಂತೆ ಮಾಡುತ್ತದೆ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಯೋಗವೆಂಬ ಅಮೂಲ್ಯ ಸಾಧನದ ಮೂಲಕ ಸ್ವಸ್ಥ, ಸುಂದರ ಬದುಕು ಕಟ್ಟಿಕೊಳ್ಳೋಣ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ.
ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುವುದರ ಜೊತೆಗೆ ವ್ಯಕ್ತಿಯನ್ನು ಸದಾ ಚೈತನ್ಯಯುತವಾಗಿರುವಂತೆ ಮಾಡುತ್ತದೆ.ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಯೋಗವೆಂಬ ಅಮೂಲ್ಯ ಸಾಧನದ ಮೂಲಕ ಸ್ವಸ್ಥ, ಸುಂದರ ಬದುಕು ಕಟ್ಟಿಕೊಳ್ಳೋಣ.
ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ… pic.twitter.com/AKbcFweUli
— Siddaramaiah (@siddaramaiah) June 21, 2025