ತುಮಕೂರು : ವಾಲಿವಾಬಾಲ್ ಆಡುವಾಗ ಕುಸಿದು ಬಿದ್ದು 9 ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಸಿರಿವಾರ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ.
ಸಿರಿವಾರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ಶಾಲೆಗೆ ಹೋದಾಗ 9 ನೇ ತರಗತಿ ವಿದ್ಯಾರ್ಥಿ ವಾಲಿಬಾಲ್ ಆಡುತ್ತಿದ್ದ ಈ ವೇಳೆ ಏಕಾಏಕಿ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯನ್ನು ಧನು ಎಂದು ಗುರುತಿಸಲಾಗಿದೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.