ಕಲಬುರಗಿ: ಬೀದರ್ ನಲ್ಲಿ ರೈಲಿಗೆ ತಲೆಕೊಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ ಕಪನೂರು ಸೇರಿ ನಾಲ್ವರು ಆರೋಪಿಗಳ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಸಿಐಡಿ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಆರೋಪಿ ರಾಜು ಕಪನೂರ ಸೇರಿದಂತೆ ನಾಲ್ವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಕಲಬುರ್ಗಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜು ಕಪನೂರ್ ನಿವಾಸದ ಮೇಲೆ ದಾಳಿ ಮಾಡಿದ್ದು ಅವರಲ್ಲದೆ ಉಳಿದ ಆರೋಪಿಗಳಾದ ಗೊರಖ್ ನಾಥ್, ರಾಮನಗೌಡ, ನಂದಕುಮಾರ್ ನಾಲ್ವರು ಆರೋಪಗಳ ಮನೆಯಲ್ಲಿ ಸಿಐಡಿ ಇದೀಗ ಶೋಧ ಕಾರ್ಯ ನಡೆಸಿದ್ದಾರೆ ಇಬ್ಬರು ಡಿವೈಎಸ್ಪಿ ಇನ್ಸ್ಪೆಕ್ಟರ್ 40 ಸಿಬ್ಬಂದಿಗಳಿಂದ ಇದೀಗ ತನಿಖೆ ಚುರುಕು ಗೊಳಿಸಿದ್ದಾರೆ.