ಬೆಂಗಳೂರು : ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ.
ಹೌದು, ರಾಜ್ಯ ಆರೋಗ್ಯ ಇಲಾಖೆಯು ರಾಜ್ಯಕ್ಕೆ ಸರಬರಾಜು ಆಗುತ್ತಿರುವ ಕಾಫ್ ಸಿರಪ್ ಗಳನ್ನು ಟೆಸ್ ಮಾಡಲು ನಿರ್ಧರಿಸಿದೆ. ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್ ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ರಾಜ್ಯದ ಎಲ್ಲೆಡೆ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಪಡೆಯುತ್ತಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ 12 ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ಈ ಸಿರಪ್ ಗಳನ್ನು ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.