ವಿಜಯಪುರ : ಭೀಮಾತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಚಂದಪ್ಪ ಹರಿಜನನ ಶಿಷ್ಯ ಬಾಗಪ್ಪ ಹರಿಜನನ್ನು ಮಂಗಳವಾರ ರಾತ್ರಿ ವಿಜಯಪುರದಲ್ಲಿ ಬರ್ಬರ ಹತ್ಯೆ ಮಾಡಲಾಗಿದೆ.
ವಿಜಯಪುರ ನಗರದ ರೆಡಿಯೋ ಮೈದಾನದಲ್ಲಿ ರಾತ್ರಿ 9.30 ರ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಿದ್ದಾರೆ. ಚಂದಪ್ಪ ಹರಿಜನನ ಶಿಷ್ಯನಾಗಿದ್ದ ಬಾಗಪ್ಪ ಆಲಮೇಲ ಸಮೀಪದ ಬ್ಯಾಡಗಿಹಾಳದಲ್ಲಿ ವಾಸವಾಗಿದ್ದ.
ವಿಜಯಪುರ ನಗರದಲ್ಲಿ ರಾತ್ರಿ ದುಷ್ಕರ್ಮಿಗಳು ಬಾಗಪ್ಪ ಹರಿಜನ್ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಬಾಗಪ್ಪ ವಿಜಯಪುರ, ಕಲಬುರಗಿ, ಬೀದರ್, ಸೊಲ್ಲಾಪುರ, ಪುಣೆಯಲ್ಲಿ ಅಕ್ರಮ ಚಟುವಟಿಕೆ ನಡೆಸಿಕೊಂಡಿದ್ದ. ಈತನ ಮೇಲೆ ಹಲವು ಪ್ರಕರಣಗಳಿದ್ದವು. ಕೆಲ ವರ್ಷಗಳ ಹಿಂದೆ ವಿಜಯಪುರ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಮೇಲೆ ಫೈರಿಂಗ್ ಆಗಿತ್ತು.