ನವದೆಹಲಿ : ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ಲಾಂಛನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿರ್ದೇಶನಗಳಿಗೆ ತಂಡವು ಬದ್ಧವಾಗಿರುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೃಢಪಡಿಸಿದೆ ಎಂದು ವರದಿಯಾಗಿದೆ. ತಂಡದ ಜರ್ಸಿಗಳ ಮೇಲೆ ಪಾಕಿಸ್ತಾನ ಹೆಸರನ್ನು ಮುದ್ರಿಸಲು ಭಾರತೀಯ ಮಂಡಳಿ ನಿರಾಕರಿಸಿದೆ ಎಂಬ ವರದಿಗಳ ಮಧ್ಯೆ, ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ಲಾಂಛನದ ಬಗ್ಗೆ ಐಸಿಸಿ ಮಾರ್ಗಸೂಚಿಗಳನ್ನ ತಂಡವು ಅನುಸರಿಸುತ್ತದೆ ಎಂದು ದೃಢಪಡಿಸಿದ್ದಾರೆ.
ಅದ್ರಂತೆ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ತಂಡದ ಜರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನ ಹಾಕಲಾಗುವುದು ಎಂದು ದೇವಜಿತ್ ಸೈಕಿಯಾ ಧೃಡಪಡೆಸಿದ್ದಾರೆ. ಇನ್ನು ಭಾರತ ತಂಡದ ಜರ್ಸಿಗಳಲ್ಲಿ ಪಾಕಿಸ್ತಾನದ ಹೆಸರನ್ನ ಹಾಕುವುದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ ಎಂಬ ವದಂತಿಗಳನ್ನ ಸೈಕಿಯಾ ತಳ್ಳಿಹಾಕಿದರು.
“ಐಸಿಸಿ ಮಾರ್ಗಸೂಚಿಗಳನ್ನು ನಾವು ಅನುಸರಿಸುತ್ತೇವೆ” ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕ್ರಿಕ್ಬಝ್ಗೆ ತಿಳಿಸಿದ್ದಾರೆ. ನಾವು ಐಸಿಸಿ ನಿರ್ದೇಶನವನ್ನು ಅನುಸರಿಸುತ್ತೇವೆ, “ಎಂದು ಅಧಿಕೃತ ದಾಖಲೆಯಲ್ಲಿ ಪಾಕಿಸ್ತಾನದ ಮುದ್ರೆ ಇದೆ ಎಂದು ತಿಳಿಸಿದಾಗ ಸೈಕಿಯಾ ಹೇಳಿದರು.
ಅಮೆರಿಕದಲ್ಲಿ ತೀವ್ರ ಹಿಮಪಾತ ; 4 ಮಂದಿ ಸಾವು, 2100 ವಿಮಾನಗಳ ಹಾರಾಟ ರದ್ದು, ಶಾಲೆಗಳು ಕ್ಲೋಸ್