ನವದೆಹಲಿ: ಉದ್ಯೋಗ ಅರಸಿ ಲಾವೋಸ್ ಮತ್ತು ಕಾಂಬೋಡಿಯಾಕ್ಕೆ ಪ್ರಯಾಣಿಸುವ ಭಾರತೀಯ ಪ್ರಜೆಗಳು ಹಗರಣಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ವಿದೇಶಾಂಗ ಸಚಿವಾಲಯ (MEA) ಸಲಹೆ ನೀಡಿದೆ.
ಈ ನಕಲಿ ಏಜೆಂಟರು ಉದ್ಯೋಗಕ್ಕಾಗಿ ಜನರನ್ನ ಆಕರ್ಷಿಸುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. “ಕಾಂಬೋಡಿಯಾ ಮತ್ತು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯಾಣಿಸುವ ಎಲ್ಲಾ ಭಾರತೀಯ ಪ್ರಜೆಗಳಿಗೆ, ಈ ಪ್ರದೇಶದಲ್ಲಿ ಅನೇಕ ನಕಲಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೂಚಿಸಲಾಗಿದೆ, ಅವರು ಭಾರತದ ಏಜೆಂಟರೊಂದಿಗೆ ಸೇರಿ, ಹಗರಣ ಕಂಪನಿಗಳಿಗೆ, ವಿಶೇಷವಾಗಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಜನರನ್ನ ಆಕರ್ಷಿಸುತ್ತಿದ್ದಾರೆ ಎಂದು ಎಚ್ಚರಿಸಿದೆ.
ಕಾಂಬೋಡಿಯಾದಲ್ಲಿ ಉದ್ಯೋಗವನ್ನ ತೆಗೆದುಕೊಳ್ಳುವ ಯಾರಾದರೂ ಭಾರತದ ವಿದೇಶಾಂಗ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರ ಅದನ್ನ ಮಾಡಬೇಕು” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಮೋಸದ ವಿಧಾನಗಳ ಮೂಲಕ ಜನರನ್ನ ಆಕರ್ಷಿಸುವ ನಿದರ್ಶನಗಳು ಈಗಾಗಲೇ ಹೊರಹೊಮ್ಮಿವೆ. ಲಾವೋಸ್ನ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಕಾಲ್-ಸೆಂಟರ್ ಹಗರಣಗಳು ಮತ್ತು ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ನಿರ್ವಹಿಸುವ ಅನುಮಾನಾಸ್ಪದ ಸಂಸ್ಥೆಗಳಿಂದ ‘ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್’ ಅಥವಾ ‘ಗ್ರಾಹಕ ಬೆಂಬಲ ಸೇವೆ’ ಮುಂತಾದ ಹುದ್ದೆಗಳಿಗೆ ಮೋಸದ ಉದ್ಯೋಗಾವಕಾಶಗಳನ್ನು ಜಾಹೀರಾತು ಮಾಡಲಾಗುತ್ತಿದೆ. ಈ ಕಂಪನಿಗಳು ದುಬೈ, ಬ್ಯಾಂಕಾಕ್, ಸಿಂಗಾಪುರ್ ಮತ್ತು ಭಾರತ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿರುವ ಏಜೆಂಟರನ್ನ ಹೊಂದಿದ್ದು, ಅವರು ಭಾರತೀಯ ನಾಗರಿಕರನ್ನ ಸಕ್ರಿಯವಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ.
BREAKING : ವಿಪ್ರೋ ಸಿಒಒ ಸ್ಥಾನಕ್ಕೆ ‘ಅಮಿತ್ ಚೌಧರಿ’ ರಾಜೀನಾಮೆ, ‘ಸಂಜೀವ್ ಜೈನ್’ ನೇಮಕ
BREAKING : ವಿಪ್ರೋ ಸಿಒಒ ಸ್ಥಾನಕ್ಕೆ ‘ಅಮಿತ್ ಚೌಧರಿ’ ರಾಜೀನಾಮೆ, ‘ಸಂಜೀವ್ ಜೈನ್’ ನೇಮಕ
BREAKING : ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಬಿಜೆಪಿ ಸಂಸದನಿಗೆ ‘ECI’ ಶೋಕಾಸ್ ನೋಟಿಸ್