ನವದೆಹಲಿ : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ‘ವಿಜ್ಞಾನ ಧಾರಾ’ ಎಂಬ ಏಕೀಕೃತ ಕೇಂದ್ರ ವಲಯದ ಯೋಜನೆಯಲ್ಲಿ ವಿಲೀನಗೊಂಡ ಮೂರು ಛತ್ರಿ ಯೋಜನೆಗಳನ್ನ ಮುಂದುವರಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇದಕ್ಕೆ ಅನುಮೋದನೆ ನೀಡಿದೆ.
ಈ ಯೋಜನೆಯು ಮೂರು ವಿಶಾಲ ಘಟಕಗಳನ್ನ ಹೊಂದಿದೆ.!
* ವಿಜ್ಞಾನ ಮತ್ತು ತಂತ್ರಜ್ಞಾನ (S&T) ಸಾಂಸ್ಥಿಕ ಮತ್ತು ಮಾನವ ಸಾಮರ್ಥ್ಯ ವರ್ಧನೆ,
* ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು
* ನಾವೀನ್ಯತೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿಯೋಜನೆ
2021-22 ರಿಂದ 2025-26 ರವರೆಗೆ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಏಕೀಕೃತ ಯೋಜನೆ ‘ವಿಜ್ಞಾನ ಧಾರಾ’ ಅನುಷ್ಠಾನಕ್ಕಾಗಿ 10,579.84 ಕೋಟಿ ರೂ.ಗಳ ಪ್ರಸ್ತಾವಿತ ವೆಚ್ಚವನ್ನ ನಿಗದಿಪಡಿಸಲಾಗಿದೆ.
BREAKING : ಬೆಂಗಳೂರಲ್ಲಿ ಭೀಕರ ‘ಡಬಲ್ ಮರ್ಡರ್’: ಮಚ್ಚಿನಿಂದ ಕೊಚ್ಚಿ ಇಬ್ಬರು ಹೆಣ್ಣುಮಕ್ಕಳನ್ನು ಕೊಂದ ತಂದೆ!
BREAKING : ಜೈವಿಕ ಉತ್ಪಾದನೆ ಉತ್ತೇಜನೆ ; ‘BioE3 ನೀತಿ’ಗೆ ‘ಕೇಂದ್ರ ಸಚಿವ ಸಂಪುಟ’ ಅನುಮೋದನೆ