ನವದೆಹಲಿ : ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ರಾಯಿಟರ್ಸ್’ಗೆ ಸಂಬಂಧಿಸಿದ ಖಾತೆಗಳು ಸೇರಿದಂತೆ 2,355 ಖಾತೆಗಳನ್ನ ನಿರ್ಬಂಧಿಸಲು ಜುಲೈ 3ರಂದು ಭಾರತದಿಂದ ಸರ್ಕಾರಿ ಆದೇಶ ಬಂದಿರುವುದಾಗಿ ಎಕ್ಸ್ ಮಂಗಳವಾರ ಬಹಿರಂಗಪಡಿಸಿದೆ.
ಈ ಆದೇಶವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಬಂದಿದ್ದು, ಇದು ಸಾರ್ವಜನಿಕ ಸುವ್ಯವಸ್ಥೆ, ಸಾರ್ವಭೌಮತ್ವ ಅಥವಾ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ವಿಷಯವನ್ನು ತೆಗೆದುಹಾಕಲು ಅಥವಾ ಖಾತೆಗಳನ್ನು ನಿರ್ಬಂಧಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್’ಗಳನ್ನು ನಿರ್ದೇಶಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ.
ಸರ್ಕಾರವು ಈ ಹಿಂದೆ ರಾಯಿಟರ್ಸ್ ಕುರಿತ ಯಾವುದೇ ಆದೇಶವನ್ನ ನಿರಾಕರಿಸಿತ್ತು. ಆದ್ರೆ, ಸಧ್ಯ X ನೀಡಿರುವ ಹೇಳಿಕೆಯು ಭಾರತ ಸರ್ಕಾರದ ಹಿಂದಿನ ಹೇಳಿಕೆಗೆ ನೇರವಾಗಿ ವಿರುದ್ಧವಾಗಿದೆ.
ಅಂದ್ಹಾಗೆ, ಭಾನುವಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) “ರಾಯಿಟರ್ಸ್ ಹ್ಯಾಂಡಲ್ ತಡೆಹಿಡಿಯಲು ಭಾರತ ಸರ್ಕಾರದಿಂದ ಯಾವುದೇ ಅವಶ್ಯಕತೆಯಿಲ್ಲ” ಎಂದು ಹೇಳಿತ್ತು.
ಆದಾಗ್ಯೂ, X, ಔಪಚಾರಿಕ ನಿರ್ಬಂಧ ಆದೇಶವನ್ನ ಸ್ವೀಕರಿಸಿದೆ ಮತ್ತು ಒಂದು ಗಂಟೆಯೊಳಗೆ ಅದನ್ನು ಪಾಲಿಸಬೇಕು, ಇಲ್ಲದಿದ್ದರೆ ಅದರ ಸ್ಥಳೀಯ ಸಿಬ್ಬಂದಿಗೆ ದಂಡ ಮತ್ತು ಸಂಭಾವ್ಯ ಜೈಲು ಶಿಕ್ಷೆ ಸೇರಿದಂತೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
‘ಡ್ರೀಮ್ ಲೈನರ್ ಅತ್ಯಂತ ಸುರಕ್ಷಿತ ವಿಮಾನ’ : ‘ಸಂಸದೀಯ ಸಮಿತಿ’ಗೆ ‘ಏರ್ ಇಂಡಿಯಾ’ ಉತ್ತರ
BREAKING : ರಾಜ್ಯದಲ್ಲಿ ಮುಂದುವರೆದ ‘ಹೃದಯಾಘಾತ’ ಮರಣ ಮೃದಂಗ : ಇಂದು ಒಂದೇ ದಿನ 6 ಜನರ ಸಾವು!