ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 9 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಭಾಷಣದಲ್ಲಿ, ರವಿದಾಸ್ ಅವರ ಜನ್ಮದಿನಾಚರಣೆ ಪುಣ್ಯದಿನ ಬಜೆಟ್ ಮಂಡಿಸಲಾಗುತ್ತಿದೆ. ಮಾಘ ಪೂರ್ಣಿಮೆಯ ದಿನ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಎಲ್ಲಾ ವರ್ಗದವರಿಗಾಗಿ ಬಜೆಟ್ ತಯಾರಿಸಲಾಗಿದೆ. ಕುಟುಂಬಳಿಗೆ ಹೆಚ್ಚಿನ ಹಣ ಸಿಗುವಂತೆ ವಿಕಸತಿ ಭಾರತದ ಗುರಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡಿದ್ದೇವೆ. ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಮೋದಿ ಅವರು ವಿಕಸಿತ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದರು.
ಖನಿಜ ಸಮೃದ್ಧವಾಗಿರುವ ರಾಜ್ಯಗಳಿಗೆ ಕಾರಿಡಾರ್ ಸ್ಥಾಪನೆ ಮಾಡಲಾಗುತ್ತದೆ. ಕೇಂದ್ರದ ಔಷಧ ಸಾಮಾರ್ಥ್ಯವನ್ನು ಹೆಚ್ಚಿಸಲಾಗುವುದು, ಮೋದಿ ಅವರು ವಿಕಸಿತ ಭಾರತಕ್ಕೆ ಕರೆಕೊಟ್ಟಿದ್ದು, 2047ರ ಗುರಿಯನ್ನು ಮೋದಿ ಇಟ್ಟುಕೊಂಡಿದ್ದಾರೆ.
ಸೆಮಿಕಂಡಕ್ಟರ್ ಮಿಷನ್ ಗೆ 40 ಸಾವಿರ ಕೋಟಿ ರೂ. ಘೋಷಣೆ ಮಾಡಲಾಗುವುದು. ತಮಿಳುನಾಡು, ಆಂಧ್ರ, ಓಡಿಶಾ, ಕೇರಳಕ್ಕೆ ಬಂಪರ್ ಘೋಷಣೆ ಮಾಡಲಾಗಿದೆ.
ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ಯ ಆರಂಭಿಸಲಾಗುವುದು. ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸಲಾಗುವುದು, ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆ ಜಾರಿ, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸಾಲದ ನೆರವು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಣವನ್ನು ಜಾರಿಗೆ ತರುತ್ತಿದ್ದೇವೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ.




