ಬೆಂಗಳೂರು : ಬೆಟ್ಟಿಂಗ್ ಮತ್ತು ಶೇಕಡ 28ರಷ್ಟು ಜಿಎಸ್‍ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರೇಸ್ ಕೋರ್ಸ್ ಮೇಲೆ ದಾಳಿ ಮಾಡಿದ್ದು, 3.45 ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರು ಕಮಿಷನರ್ ಬಿ. ದಯಾನಂದ್ ಮಾಹಿತಿ ನೀಡಿದ್ದು, “ಅಧಿಕೃತ, ಅನಧಿಕೃತವಾಗಿ ಬೆಟ್ಟಿಂಗ್ ನಡೆಸಲಾಗ್ತಿತ್ತು. ಇನ್ನು ಯಾವುದೇ ದಾಖಲೆ ಇಲ್ಲದೇ ಹಣದ ವ್ಯವಹಾರ ನಡೆಸಲಾಗ್ತಿದೆ ಎಂದು ಮಾಹಿತಿ ಬಂದಿತ್ತು. ಹಾಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 3.45 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. 66 ಜನರಿಂದ ಮಾಹಿತಿ ಪಡೆದು ನೋಟಿಸ್ ನೀಡಿದ್ದೇವೆ. ಇನ್ನು ಸಿಆರ್‍ಪಿ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿದೆ. ಸಧ್ಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ” ಎಂದು ತಿಳಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ ಎಸ್‍ಐಟಿ ರಚಿಸಿ: ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
BIG NEWS: ‘KSDL ಅಧಿಕಾರಿ’ಗಳಿಂದ ‘ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ’ದ ಮೇಲೆ ದಾಳಿ: 2 ಕೋಟಿ ವಸ್ತು ಸೀಜ್
BIG NEWS: ಬಾಬ್ರಿ ಮಸೀದಿಯಂತೆ ‘ಚಿನ್ನದಪಲ್ಲಿ ಮಸೀದಿ’ ನಿರ್ನಾಮ: ಸಂಸದ ‘ಅನಂತ್ ಕುಮಾರ್ ಹೆಗ್ಡೆ’ ಸ್ಪೋಟಕ ಹೇಳಿಕೆ