ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2024 ರ ಪರಿಷ್ಕೃತ ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. 10 ಮತ್ತು 12 ನೇ ತರಗತಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಭ್ಯರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ cbse.gov.in ನಲ್ಲಿ ಪರಿಶೀಲಿಸಬಹುದು.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಕೆಲವು ಪತ್ರಿಕೆಗಳ ಪರೀಕ್ಷಾ ದಿನಾಂಕಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ಮಾರ್ಚ್ 4, 2024 ರಂದು ನಡೆಯಬೇಕಿದ್ದ 1 ನೇ ತರಗತಿ ಟಿಬೆಟಿಯನ್ ಪತ್ರಿಕೆಯನ್ನ ಬದಲಾಯಿಸಲಾಗಿದೆ ಮತ್ತು ಈಗ ಫೆಬ್ರವರಿ 23, 2024ರಂದು ನಡೆಯಲಿದೆ. ಫೆಬ್ರವರಿ 16 ರಂದು ನಿಗದಿಯಾಗಿದ್ದ 10ನೇ ತರಗತಿ ರಿಟೈಲ್ ಪೇಪರ್ ಈಗ ಫೆಬ್ರವರಿ 28, 2024ರಂದು ನಡೆಸಲಾಗುವುದು.
ಅಂತೆಯೇ, 12 ನೇ ತರಗತಿಗೆ, ಮಾರ್ಚ್ 11 ರಂದು ನಿಗದಿಯಾಗಿದ್ದ ಫ್ಯಾಷನ್ ಸ್ಟಡೀಸ್’ನ್ನ ಬದಲಾಯಿಸಲಾಗಿದೆ ಮತ್ತು ಈಗ ಮಾರ್ಚ್ 21, 2024 ರಂದು ನಡೆಸಲಾಗುವುದು.
ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 15 ರಂದು ಪ್ರಾರಂಭವಾಗಿ ಮಾರ್ಚ್ 13, 2024 ರಂದು ಕೊನೆಗೊಳ್ಳುತ್ತದೆ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 2, 2024 ರಂದು ಕೊನೆಗೊಳ್ಳುತ್ತದೆ. 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಒಂದೇ ಪಾಳಿಯಲ್ಲಿ ನಡೆಯಲಿವೆ.
“ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಸೇವೆ ಸಲ್ಲಿಸುತ್ತಿದ್ದಾರೆ”: ಟಿಎಂಸಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ